ಕೊಲೋನ್ 2

ಪನಾಮಾ ರಾಜ್ಯದ ಉತ್ತರ ತೀರದ ಒಂದು ಪ್ರಾಂತ್ಯ. ಪನಾಮಾ ಕಾಲುವೆಯ ಪೂರ್ವ ಪಶ್ಚಿಮಗಳ ಕಡೆ ಹರಡಿದೆ. ವಿಸ್ತೀರ್ಣ 2,861 ಚ.ಮೈ. ಜನಸಂಖ್ಯೆ 1,03,738 (1960). ಈ ಪ್ರಾಂತ್ಯದ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಪನಾಮಾ ಕಾಲುವೆ ಪ್ರದೇಶದ ನಗರಗಳಲ್ಲಿ ವಾಸಿಸುತ್ತಾರೆ. ಈ ಪ್ರಾಂತ್ಯಕ್ಕೆ ಹಲವು ಕೃಷಿ ಜಿಲ್ಲೆಗಳು ಮತ್ತು ಕೆಲವು ಕೈಗಾರಿಕಾ ಕೇಂದ್ರಗಳು ಸೇರಿವೆ. ಕೊಲೋನ್ ನಗರ ಕೊಲೋನ್ ಪ್ರಾಂತ್ಯದ ರಾಜಧಾನಿ. ಇದಕ್ಕೆ 20 ಮೈ.ದೂರದಲ್ಲಿ ಪೋರ್ಟೊ ಬೆಲೋ ರೇವುಪಟ್ಟಣವಿದೆ.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ